General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Thursday, July 18, 2024

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷಾ ವಿಧಾನ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, July 18, 2024

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷಾ ವಿಧಾನ 


 

ಕೆ-ಸೆಟ್ ಸಂಸ್ಥೆಯಲ್ಲಿ ಬಹುಆಯ್ಕೆ ಪ್ರಶ್ನೆಗಳ ನ್ನೊಳಗೊಂಡ ಪ್ರಶ್ನೆ ಪತ್ರಿಕೆಗಳಿರುತ್ತವೆ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಜತೆಗೆ ನೀಡುವ ಮೊದಲ ಪತ್ರಿಕೆ ಮತ್ತು 2ನೇ ಪತ್ರಿಕೆಗಳ ಒಎಂಆರ್ ಹಾಳೆಯಲ್ಲಿ ನಿಗದಿ ಪಡಿಸಿದ ನಮೂನೆಯಲ್ಲೇ ಉತ್ತರಗಳನ್ನು ಗುರುತಿಸಬೇಕು.

Download Link given below Click & download

ಮೊದಲ ಪತ್ರಿಕೆ (ಸಾಮಾನ್ಯ ಪತ್ರಿಕೆ): ಈ

ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಬುದ್ಧಿ ಸಾಮರ್ಥ್ಯಕ್ಕೆ ಅನುಗುಣ ವಾಗಿರುತ್ತದೆ. ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಯನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯಕ್ಕೆ ಸಂಬಂಧಿಸಿದ. ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 100 ಅಂಕಗಳ 50 ಪ್ರಶ್ನೆಗಳಿರುತ್ತವೆ. ಬರೆಯಲು 1 ಗಂಟೆ ಸಮಯಾವಕಾಶವಿರುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತವೆ ಹಾಗೂ ಎಲ್ಲ ಪ್ರಶ್ನೆ ಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕಾಗಿರುತ್ತದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

2ನೇ ಪತ್ರಿಕೆ (ವಿಷಯ ಪತ್ರಿಕೆ): ಇದರಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿರುತ್ತವೆ. ಇದರಲ್ಲಿ 200 ಅಂಕಗಳ 100 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ 2 ಅಂಕಗಳಾಗಿವೆ. 2 ಗಂಟೆ ಸಮಯಾವಕಾಶವಿರುತ್ತದೆ. ತಪ್ಪಾದ ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನವಿರು ವುದಿಲ್ಲ, ಈ ಪತ್ರಿಕೆಗಳ ಪರೀಕ್ಷೆಗಳು ಬೆಳಗ್ಗೆ

10ರಿಂದ ಮಧ್ಯಾಹ್ನ 1ರ ತನಕ ನಡೆಯಲಿವೆ. ಕನಿಷ್ಠ ಅಂಕ ಪಡೆಯುವುದು ಕಡ್ಡಾಯ ಪರಿಗಣಿಸಬೇಕಾದರೆ, ಮೊದಲ ಪತ್ರಿಕೆ ಮತ್ತು 2ನೇ ಪತ್ರಿಕೆ ಎರಡರಲ್ಲೂ ಹಾಜರಾಗಿ, ಕಡ್ಡಾಯವಾಗಿ ಒಟ್ಟು ಮೊತ್ತದಲ್ಲಿ ಕನಿಷ್ಠ ಅಂಕಗಳನ್ನು ಪಡೆಯಬೇಕು. ಮೊದಲ ಪತ್ರಿಕೆಯಲ್ಲಿ ಶೇ.40, 2ನೇ ಆಯ್ಕೆ ವಿಷಯದ

ಪತ್ರಿಕೆಯಲ್ಲಿ ಶೇ.35ರಷ್ಟು ಕನಿಷ್ಠ ಅಂಕ ಗಳಿಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿ ಗಳು ಎರಡೂ ಪತ್ರಿಕೆಯಲ್ಲಿ ಶೇ.40ರಷ್ಟು ಮತ್ತು ಮೀಸಲಾತಿ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ವಿಶೇಷಚೇತನ (ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯುಡಿ) ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಶೇ.35 ಅಂಕಗಳನ್ನು ಗಳಿಸಿರ ಬೇಕು. ಅಂತಹ ಅಭ್ಯರ್ಥಿಗಳನ್ನು ಮಾತ್ರ ಅರ್ಹತಾ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುತ್ತದೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪುkpsc2019

ಅರ್ಹತೆ ಪರಿಗಣನೆ: ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು. ಯುಜಿಸಿಯ ಫಲಿತಾಂಶದ ಸೂತ್ರದ ಪ್ರಕಾರ, ಸ್ಟಾಟ್‌ಗಳನ್ನು ತಯಾರಿಸಿ, ರಾಜ್ಯ ಸರಕಾರದ ಮೀಸಲಾತಿ ನೀತಿಯ ಅನುಸಾರವಾಗಿ ಲೆಕ್ಕಾಚಾರ ಮಾಡಿ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಫಲಿತಾಂಶವನ್ನು ಪ್ರಕಟಿಸಲಾಗು ವುದು. ಯುಜಿಸಿಯ ನಿರ್ದೇಶನದ ಪ್ರಕಾರ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಲ್ಲಿ • ಶೇಕಡಾ 6ರಷ್ಟು ಅಭ್ಯರ್ಥಿಗಳನ್ನು ಮಾತ್ರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹರು ಎಂದು ಪರಿಗಣಿಸಲಾಗುವುದು. ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯನ್ನು ಅನುಸರಿಸಿ ಸಹಾಯಕ ಪ್ರಾಧ್ಯಾಪಕರ ಅರ್ಹತಾ ತಯಾರಿಸಲು ಬಳಸಲಾಗುತ್ತದೆ.

ಪಟ್ಟಿ ಪರೀಕ್ಷಾ ಪಠ್ಯಕ್ರಮ: ಕೆ-ಸೆಟ್ ಪರೀಕ್ಷಾ ಪಠ್ಯಕ್ರಮವು ಯು.ಜಿ.ಸಿ, ಸಿ.ಎಸ್.ಐ.ಆರ್. ನೆಟ್‌ಗೆ ನಿಗಡಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ. ಎಲ್ಲ ವಿಷಯಗಳ ವಠ್ಯಕ್ರಮವನ್ನು ಕೆಇಎ ವೆಬ್‌ಸೈಟ್‌ನಲ್ಲಿ ಡೌನ್‌ ಲೋಡ್ ಮಾಡಿಕೊಳ್ಳಬಹುದು. ಕೆ-ಸೆಟ್ ಪರೀಕ್ಷೆ 41 ವಿಷಯಗಳಿಗೆ ನಡೆಯಲಿದೆ. ಅವುಗಳ ಪ್ರಶ್ನೆ ಪತ್ರಿಕೆಯು ಕನ್ನಡ ಇಂಗ್ಲಿಷ್ ಮತ್ತು ಮಾಧ್ಯಮದಲ್ಲಿರುತ್ತದೆ.

ಪರೀಕ್ಷೆ ಬರೆಯಬಹುದಾದ 41 ವಿಷಯಗಳು

ವಾಣಿಜ್ಯಶಾಸ್ತ್ರ ಕನ್ನಡ, ಅರ್ಥಶಾಸ್ತ್ರ ಇಂಗ್ಲಿಷ್, ರಾಜ್ಯಶಾಸ್ತ್ರ ಇತಿಹಾಸ, ಸಮಾಜಶಾಸ್ತ್ರ ಭೂಗೋಳಶಾಸ್ತ್ರ ಹಿಂದಿ, ನಿರ್ವಹಣೆ (ಮ್ಯಾನೇಜ್ ಮೆಂಟ್), ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ, ಶಿಕ್ಷಣ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಮನೋವಿಜ್ಞಾನ, ಸಮಾಜ ಕಾರ್ಯ, ಅಪರಾಧಶಾಸ್ತ್ರ ಕಾನೂನು, ಸಂಸ್ಕೃತ, ದೈಹಿಕ ಶಿಕ್ಷಣ, ಜನಪದ ಸಾಹಿತ್ಯ, ಉರ್ದು, ಸಾರ್ವಜನಿಕ ಆಡಳಿತ, ಗಣಕ ವಿಜ್ಞಾನ ಮತ್ತು ಅನ್ವಯ, ಭೌತಿಕ ವಿಜ್ಞಾನಗಳು, ಗಣಿತ ವಿಜ್ಞಾನಗಳು, ರಸಾಯನಿಕ ವಿಜ್ಞಾನಗಳು, ಜೀವವಿಜ್ಞಾನ, ಪರಿಸರ ವಿಜ್ಞಾನ, ಪರಿಸರ ವಿಜ್ಞಾನ, ಗೃಹ ವಿಜ್ಞಾನ, ವಿದ್ಯುನ್ಮಾನ ವಿಜ್ಞಾನ, ಭೂ ವಿಜ್ಞಾನ, ಪುರಾತತ್ತ್ವ ಶಾಸ್ತ್ರ (ಆರ್ಕಿಯಾಲಜಿ), ಮಾನವ ಶಾಸ್ತ್ರ, ಮರಾಠಿ, ತತ್ವ ಶಾಸ್ತ್ರ, ಮಹಿಳಾ ಅಧ್ಯಯನ, ಭಾಷಾಶಾಸ್ತ್ರ ಪ್ರದರ್ಶಕ ಕಲೆಗಳು ಹಾಗೂ ಸಂಗೀತ, ದೃಶ್ಯ ಕಲೆಗಳು

ವೈಯಕ್ತಿಕ ಬಳಕೆಗೆ ಮಾತ್ರ

 

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆhttps://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು PDF ಗಳನ್ನು ರೀತಿಯಲ್ಲಿ ಮಾತ್ರ ಬಳಸಿ. ಮತ್ತು PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷಾ ವಿಧಾನ

Previous
« Prev Post

No comments:

Post a Comment

My Blog List

Followers

Popular Posts