ಶೀರ್ಷಿಕೆ: PSI Essay : ಗ್ರಾಹಕ
(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)
ಗ್ರಾಹಕ:
- ಗ್ರಾಹಕರೆಂದರೆ ವಸ್ತುಗಳನ್ನು ಕೊಳ್ಳುವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ ಅಥವಾ ವೇತನ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರಾಗಿದ್ದಾರೆ ಅಥವಾ ಪದಾರ್ಥಗಳನ್ನು ಬಳಸಿಕೊಳ್ಳುವವರಾಗಿದ್ದಾರೆ.
ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ವ್ಯಾಪಾರ ಎನ್ನುತ್ತೇವೆ.
ಗ್ರಾಹಕ ರಕ್ಷಣೆ:
- ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಗ್ರಾಹಕ ರಕ್ಷಣೆ ಎನ್ನುತ್ತಾರೆ.
ಶೋಷಣೆಯಿಂದ ಮುಕ್ತಗೊಳಿಸಲು ಗ್ರಾಹಕ ರಕ್ಷಣೆ ಅಗತ್ಯವಾಗಿದೆ.
**ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಅನೇಕ ಹಕ್ಕುಗಳನ್ನು ಮತ್ತು ಭರವಸೆಗಳನ್ನು ನೀಡಲಾಗಿದೆ. ಈ ಭರವಸೆಗಳನ್ನು ಗ್ರಾಹಕರ ಹಕ್ಕುಗಳು ಎನ್ನುತ್ತಾರೆ.
ಗ್ರಾಹಕ ಸಂರಕ್ಷಣಾ ಕಾಯ್ದೆ:
- ಅಗತ್ಯ ವಸ್ತುಗಳ ಕಾಯಿದೆ, ತೂಕ ಮತ್ತು ಅಳತೆ ಕಾಯಿದೆ, ಆಹಾರ ಕಲಬೆರಕೆ ಪ್ರತಿಬಂಧಕ ಕಾಯಿದೆ ಇತ್ಯಾದಿ,
- ಭಾರತ ಸರಕಾರವು 1986ರಲ್ಲಿ ಜಾರಿಗೆ ತಂದ ಗ್ರಾಹಕ ಸಂರಕ್ಷಣಾ ಕಾಯಿದೆ ಈ ದಿಸೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ.
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
ವಿಶ್ವಗ್ರಾಹಕ ದಿನಾಚರಣೆ:
- ವಿಶ್ವಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಮಾರ್ಚ್ 15, 1962 ಒಂದು ಮಹತ್ವದ ದಿನವಾಗಿದೆ.
- ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ ಅವರು ಅಲ್ಲಿನ ನಾಗರಿಕರಿಗೆ ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದರು.
- ಈ ಕಾರಣದಿಂದ ಪ್ರತಿ ವರ್ಷವು ಮಾರ್ಚ್ 15ನೇ ತಾರೀಕಿನಿಂದ ವಿಶ್ವಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ.
ಕಾಯ್ದೆಯ ಮುಖ್ಯ ಉದ್ದೇಶಗಳು
- ಗ್ರಾಹಕ ಸಂರಕ್ಷಣಾ ಕಾಯಿದೆಯು ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶ ನೀಡುವುದು.
- ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
- ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು.
- ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.
- ಬಳಕೆದಾರರು ತಾವು ಖರೀದಿಸುವ ವಸ್ತು ಅಥವಾ ಸೇವೆಗಳಿಂದ ತೊಂದರೆಗೆ ಒಳಗಾದಲ್ಲಿ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದು.
- ಗ್ರಾಹಕ ಶಿಕ್ಷಣ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು.
- ಒಟ್ಟಿನಲ್ಲಿ ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯುವಂತೆ ಮಾಡುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ.**
ಪ್ರಕಟಣೆ ದಿನಾಂಕ: 2022
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಸ್ಕ್ಯಾನ್ ಮಾಡಿದ ಪ್ರತಿ: ಹೌದು
ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment