General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Thursday, May 30, 2024

ವಿಶ್ವ ತಂಬಾಕು ರಹಿತ ದಿನಾಚರಣೆ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, May 30, 2024

ವಿಶ್ವ ತಂಬಾಕು ರಹಿತ ದಿನಾಚರಣೆ.


 30 ಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ನಿಷೇಧ ದಿನವನ್ನು ಆಚರಿಸಲಾಗುತ್ತದೆ. : *

ಆರಂಭ ಯಾವಾಗ?: ತಂಬಾಕು

ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು-ನೋವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯು ಎಚ್‌ಒ) 1987ರಲ್ಲಿ ಈ ನಿರ್ಣಯವನ್ನು ಅಂಗೀಕರಿಸಿತು. ತಂಬಾಕು ಉತ್ಪನ್ನಗಳನ್ನು ಜನರು ಬಳಸದೇ ಇರಲಿ ಎನ್ನುವುದು ಈ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶ. ಹೀಗಾಗಿ ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ನಿಷೇಧ ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಯುವಕರಲ್ಲಿ ತಂಬಾಕು ಸೇವನೆ: 2022ರ ಮಾಹಿತಿ ಪ್ರಕಾರ

13-15 ವರ್ಷದೊಳಗಿನ ಕನಿಷ್ಠ 37 ಮಿಲಿಯನ್ ಯುವಕರು ವಿಶ್ವಾದ್ಯಂತ ನಾನಾ ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಯೂರೋಪಿಯನ್ ಪ್ರದೇಶದಲ್ಲಿ ಶೇ.11.5ರಷ್ಟು ಹುಡುಗರು, ಶೇ.10.1ರಷ್ಟು (4 ಮಿಲಿಯನ್) ಹುಡುಗಿಯರು ತಂಬಾಕು ಬಳಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ನಿಕೋಟಿನ್ ಪೌಚ್ ಗಳಂಥ ಉತ್ಪನ್ನಗಳ ಬಳಕೆ ಯುವ ಜನರಲ್ಲಿ ಹೆಚ್ಚಿದೆ. 2022ರಲ್ಲಿ ಶೇ.2ರಷ್ಟು ವಯಸ್ಕರಿಗೆ ಹೋಲಿಸಿದರೆ ಯೂರೋಪಿಯನ್ ಭಾಗದಲ್ಲಿ ಶೇ.12.5ರಷ್ಟು ಹದಿಹರೆಯದವರು ಇ-ಸಿಗರೇಟ್ ಗಳನ್ನು ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲ ದೇಶಗಳಲ್ಲಿ ಶಾಲಾ ಮಕ್ಕಳಲ್ಲಿ ಇ ಸಿಗರೇಟ್ ಬಳಕೆಯ ದರವು ಸಿಗರೇಟ್ ಬಳಕೆಯ ದರಕ್ಕಿಂತ 2-3 ಪಟ್ಟು ಹೆಚ್ಚಿದೆ.

ದುಷ್ಪರಿಣಾಮ: ಶ್ವಾಸಕೋಶ, ಅಡ್ರಿನಲ್ ಗ್ರಂಥಿ, ಹೊಟ್ಟೆ

ಮೂಗು, ಮೂತ್ರಚೀಲ, ಮೇದೋಜೀರಕ ಗ್ರಂಥಿ, ಪಿತ್ತಜನಕಾಂಗ, ಮೂತ್ರಜನಕಾಂಗ, ಸರ್ವಿಕಲ್, ಬಾಯಿ, ಧ್ವನಿಪೆಟ್ಟಿಗೆ, ತಲೆ ಮತ್ತು ಕುತ್ತಿಗೆ, ಸ್ತನ, ಅನ್ನನಾಳದ ಕ್ಯಾನ್ಸರ್ ತಂಬಾಕು ವ್ಯಸನಿಗಳಲ್ಲಿ ಸಾಮಾನ್ಯ. ಇನ್ನು ತಂಬಾಕು ಸೇವನೆಯಿಂದ ಬರುವ ರೋಗಗಳಲ್ಲಿ ಪ್ರಮುಖವಾದವೆಂದರೆ ಹೃದ್ರೋಗ, ಅಲ್ಲಿಮರ್ಸ್, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ). ಎಂಫೀಸಿಮಾ(ಶ್ವಾಸಕೋಶದ ವಾಯುಕೋಶಗಳ ಊತ), ಪಾರ್ಶ್ವವಾಯು, ನೆನಪಿನ ಶಕ್ತಿ ಕುಂದುವಿಕೆ, ದೀರ್ಘಕಾಲದ ಶ್ವಾಸಕೋಶದ ಅಡಚಣೆ. ಅಲ್ಲದೆ ಕಡಿಮೆ ತೂಕದ ಶಿಶು ಜನಿಸುವ ಸಾಧ್ಯತೆಯೂ ಇರುತ್ತದೆ. *5 18729

ಮೊದಲ ರಾಷ್ಟ್ರ: ತಂಬಾಕು ಸೇವನೆಗೆ ಕಡಿವಾಣ ಹಾಕಲು

ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಕಡಿವಾಣ ಹಾಕಿವೆ. ಆದರೆ ಈ ಸಂಬಂಧ ದಿಟ್ಟ ಹೆಜ್ಜೆ ಇಟ್ಟ ಮೊದಲ ರಾಷ್ಟ್ರ ಐರ್ಲೆಂಡ್. ಅಷ್ಟೇ ಭಾರತದಲ್ಲಿ ತಂಬಾಕು ಸೇವನೆ?

ಭಾರತದಲ್ಲಿ 2018ರ ಹೊತ್ತಿಗೆ 16ರಿಂದ 64 ವರ್ಷದೊಳಗಿನ 250 ಮಿಲಿಯನ್ ಜನ ತಂಬಾಕು ಸೇವಿಸುವ ಮೂಲಕ ಜಾಗತಿಕವಾಗಿ ತಂಬಾಕು ಸೇವನೆಯಲ್ಲಿ 2ನೇ ಸ್ಥಾನದಲ್ಲಿದೆ. 20-44 ವಯೋಮಾನದವರಲ್ಲಿ ತಂಬಾಕು ಚಟ. ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಅದರಲ್ಲೂ ಶೇ.49ರಷ್ಟು ಯುವಕರು ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ ಎಂದು ವರದಿ ಹೇಳುತ್ತದೆ. ಭಾರತದಲ್ಲಿ ತಂಬಾಕು ಸೇವಿಸುವವರಲ್ಲಿ ಶೇ.8ರಷ್ಟು ಕಾನೂನುಬದ್ಧವಾಗಿ ತಯಾರಿಸಿದ ಸಿಗರೇಟುಗಳನ್ನು ಸೇವಿಸಿದರೆ, ಶೇ.92ರಷ್ಟು ವ್ಯಸನಿಗಳು ಬೀಡಿ, ಜಗಿಯುವ ತಂಬಾಕು, ಖೈನಿ ಮತ್ತಿತರ ಅಗ್ಗದ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಭಾರತ ಪ್ರತಿ ವರ್ಷ ತನ್ನ ಜಿಡಿಪಿಯ ಶೇ.1ರಷ್ಟು : ಭಾಗವನ್ನು ತಂಬಾಕು ಸೇವನೆಯಿಂದ ಸಂಭವಿಸುವ ಆರಂಭಿಕ ಸಾವು ಮತ್ತು ರೋಗಗಳಿಗೆ ಮೀಸಲಿಡಬೇಕಿದೆ ಎಂದು ತಂಬಾಕು ಸೇವನೆ ಕುರಿತಂತೆ ಸಮೀಕ್ಷೆ ನಡೆಸಿರುವ ಕೆಪಿಎಂಜಿ ಅಶೂರನ್ಸ್ ಆಂಡ್ ಕನ್ಸಲಿಂಗ್ ಸರ್ವಿಸಸ್ 2023ರ ವರದಿ ತಿಳಿಸಿದೆ.

ಅಲ್ಲದೆ, ತಂಬಾಕು ಜಾಹೀರಾತು ಮತ್ತು ಉತ್ಪನ್ನಗಳನ್ನು ನಿಷೇಧಿ ಸಿದ ಮೊದಲ ಯೂರೋಪಿಯನ್ ಒಕ್ಕೂಟದ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ವರ್ಷದ ಧೈಯವಾಕ್ಯ: Protecting children from tobacco industry interference (ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು) ಈ ಘೋಷವಾಕ್ಯದೊಂದಿಗೆ ಪ್ರಸಕ್ತ ಸಾಲಿನ ತಂಬಾಕು ನಿಷೇಧ ದಿನವನ್ನು ಆಚರಿಸಲಾಗುತ್ತಿದೆ.

2024 ಥೀಮ್ ಮತ್ತು ಭಾರತದಲ್ಲಿ ಪ್ರಾಮುಖ್ಯತೆ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುತ್ತದೆ. ಈ ವರ್ಷದ ಧ್ಯೇಯ ವಾಕ್ಯ "ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು

Download Link given below Click & download

ಈ ದಿನಾಚರಣೆಯು ಜಾಗೃತಿ ಮೂಡಿಸುವುದರ ಮೇಲೆ ಕೇಂದ್ರೀಕರಿಸಿದೆ ಮತ್ತು ಜಾಗತಿಕ ಮಟ್ಟದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜನರನ್ನು ತಿಳಿವಳಿಕೆ ನೀಡುವುದು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಭಾರತದಲ್ಲಿ ತಂಬಾಕು ರಹಿತ ದಿನಾಚರಣೆಯ ಪ್ರಾಮುಖ್ಯತೆ:


ಭಾರತವು ವಿಶ್ವದ ಎರಡನೇ ಅತಿ ದೊಡ್ಡ ತಂಬಾಕು ಸೇವನೆ ಮಾಡುವ ದೇಶವಾಗಿದೆ.

ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ.

ತಂಬಾಕು ಸೇವನೆಯು ಹೃದಯ ಕಾಯಿಲೆ, ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆಗಳು ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

2024 ರ ಥೀಮ್‌ನ ಪ್ರಕಾರ, ಭಾರತ ಸರ್ಕಾರವು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:


ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧ: 2016 ರಲ್ಲಿ, ಭಾರತವು ಸಿಗರೇಟ್‌ಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸುವ ಕಠಿಣ ಕಾನೂನುಗಳನ್ನು ಜಾರಿಗೆ ತಂದಿತು.

ಜಾಗೃತಿ ಮೂಡಿಸುವ ಕಾರ್ಯಕ್ರಮಗಳು: ಸರ್ಕಾರವು ತಂಬಾಕು ಸೇವನೆಯ ಅಪಾಯಗಳ ಕುರಿತು ಜನರನ್ನು ಶಿಕ್ಷಣ ನೀಡಲು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಮಕ್ಕಳನ್ನು ರಕ್ಷಿಸುವುದು: ತಂಬಾಕು ಉದ್ಯಮವು ಮಕ್ಕಳನ್ನು ಗುರಿಯಾಗಿಸಿಕೊಳ್ಳುವುದನ್ನು ತಡೆಯಲು ಸರ್ಕಾರವು ಕ್ರಮಗಳನ್ನು ಕೈಗೊಂಡಿದೆ.

ನಾವು ಏನು ಮಾಡಬಹುದು:


ತಂಬಾಕು ಸೇವನೆ ಮಾಡುವುದನ್ನು ಬಿಡುವುದು ಅಥವಾ ಯಾರಾದರೂ ತಿಳಿದಿರುವವರು ಬಿಡಲು ಪ್ರೋತ್ಸಾಹಿಸುವುದು.

ತಂಬಾಕು ಉತ್ಪನ್ನಗಳ ಮಾರಾಟದ ಬಗ್ಗೆ ದೂರು ನೀಡುವುದು.

ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ತಂಬಾಕು ಸೇವನೆಯ ಅಪಾಯಗಳ ಕುರಿತು ಇತರರಿಗೆ ತಿಳಿಸುವುದು.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪುkpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ

 

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆhttps://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು PDF ಗಳನ್ನು ರೀತಿಯಲ್ಲಿ ಮಾತ್ರ ಬಳಸಿ. ಮತ್ತು PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ವಿಶ್ವ ತಂಬಾಕು ರಹಿತ ದಿನಾಚರಣೆ.

Previous
« Prev Post

No comments:

Post a Comment

My Blog List

Followers

Popular Posts