General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Thursday, May 30, 2024

BSF Recruitment 2024 | ಬಿಎಸ್‌ಎಫ್‌ನಲ್ಲಿ ಹುದ್ದೆಗಳ ನೇಮಕಾತಿ 2024

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, May 30, 2024

BSF Recruitment 2024 | ಬಿಎಸ್‌ಎಫ್‌ನಲ್ಲಿ ಹುದ್ದೆಗಳ ನೇಮಕಾತಿ 2024

 

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಪ್ರಮುಖವಾಗಿರುವ ಬಾರ್ಡ‌ರ್ ಸೆಕ್ಯುರಿಟಿ ಪೋರ್ಸ್ (ಬಿಎಸ್‌ಎಫ್) ವಾಟರ್ ವಿಂಗ್‌ನಲ್ಲಿ ಖಾಲಿ ಇರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ವೃಂದದ ಮಾಸ್ಟರ್, ಚಾಲಕ, ಇಂಜಿನ್ ಡೈವರ್, ಮಷಿನಿಸ್ಟ್, ಕಾರ್ಪೆಂಟರ್, ಪ್ಲಂಬರ್ ಮೊದಲಾದ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಎಸ್‌ಐ, ಹೆಡ್ ಕಾನ್‌ಸ್ಟೆಬಲ್, ಕಾನ್ ಸ್ಟೆಬಲ್ ದರ್ಜೆಯ ಹುದ್ದೆಗಳು ಇವಾಗಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂ.30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಗಳಲ್ಲಿ ವ್ಯತ್ಯಾಸವಾಗಬಹುದು . ಎಂದು ತಿಳಿಸಲಾಗಿದೆ. ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ

Download Link given below Click & download

ವಿದ್ಯಾರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು 12ನೇ ತರಗತಿ, ಐಟಿಐ, ಡಿಪ್ಲೊಮಾ, ಮೆಟ್ರಿಕ್ಯುಲೇಷನ್ ಜಲ ಸಾರಿಗೆ ಪ್ರಾಧಿಕಾರ/ಸಾಗರ ಇಲಾಖೆಯಿಂದ ವಾಟರ್ ಪ್ರಮಾಣಪತ್ರ ಇಂಜಿನ್ ಚಾಲಕ ಪ್ರಮಾಣಪತ್ರ, ಸೆರಾಂಗ್ ಪ್ರಮಾಣಪತ್ರ /ತತ್ಸಮಾನ ವಿದ್ಯಾರ್ಹತೆ, ಪ್ರಮಾಣ ಪತ್ರ ಹೊಂದಿರಬೇಕು

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ವಯೋಮಿತಿ: 

ಎಸ್‌ಐ (ಮಾಸ್ಟರ್), ಎಸ್‌ಐ (ಇಂಜಿನ್ ಚಾಲಕ) ಹುದ್ದೆಗೆ 22-28 ವರ್ಷ, ಹೆಡ್ ಕಾನ್‌ಸ್ಟೆಬಲ್ (ಮಾಸ್ಟರ್), ಹೆಡ್ ಕಾನ್‌ಸ್ಟೆಬಲ್ (ಎಂಜಿನ್ ಡ್ರೈವರ್), ಹೆಡ್ ಕಾನ್‌ಸ್ಟೆಬಲ್ (ಕಾರ್ಯಾಗಾರ), ಕಾನ್ ಸ್ಟೆಬಲ್ ಹುದ್ದೆಗೆ 20-25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಶುಲ್ಕ

ಗ್ರೂಪ್ ಬಿ (ಜನರಲ್/ಒಬಿಸಿ/ಇಡಬ್ಲ್ಯುಎಸ್) ವರ್ಗದ ಅಭ್ಯರ್ಥಿಗಳಿಗೆ 200ರೂ. ಗ್ರೂಪ್ ಸಿ (ಜನರಲ್/ಒಬಿಸಿ/ಇಡಬ್ಲ್ಯುಎಸ್) ವರ್ಗದ ಅಭ್ಯರ್ಥಿಗಳಿಗೆ 100ರೂ. ಎಸ್ಸಿ/ಎಸ್ಟಿ/ಇಎಸ್‌ಎಂ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಆನ್ ಲೈನ್ ಅಲ್ಲಿ ಮಾತ್ರ ಶುಲ್ಕ ಪಾವತಿಸಬೇಕು.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪುkpsc2019

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು rectt.bsf.gov.in ៩ ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಗತ್ಯವಿರುವ ಎಲ್ಲ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ ಲೋಡ್ ಮಾಡಬೇಕು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಗುಣಮಟ್ಟ/ದಕ್ಷತೆ, ವೈದ್ಯಕೀಯ ಪರೀಕ್ಷೆ ಸಂದರ್ಶನ, ದಾಖಲೆ ಪರಿಶೀಲನೆ ಮಾಡುವ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ವೇತನ : ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 21,700.-1,12,400. đ ನಿಗದಿಪಡಿಸಲಾಗಿದೆ

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ಅರ್ಜಿ ಸಲ್ಲಿಕೆಗೆ ಅಂತಿಮ ದಿನ 30.06.2024

ವೈಯಕ್ತಿಕ ಬಳಕೆಗೆ ಮಾತ್ರ


 

Click here to apply

 

PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆhttps://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು PDF ಗಳನ್ನು ರೀತಿಯಲ್ಲಿ ಮಾತ್ರ ಬಳಸಿ. ಮತ್ತು PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading BSF Recruitment 2024 | ಬಿಎಸ್‌ಎಫ್‌ನಲ್ಲಿ ಹುದ್ದೆಗಳ ನೇಮಕಾತಿ 2024

Previous
« Prev Post

No comments:

Post a Comment

My Blog List

Followers

Popular Posts