General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Monday, January 31, 2022

ಸಾಮಾನ್ಯ ವಿಜ್ಞಾನ - ಜೀವಕೋಶ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, January 31, 2022

Title : ಸಾಮಾನ್ಯ ವಿಜ್ಞಾನ - ಜೀವಕೋಶ

(Educational & Informational Purpose Only)



1) ಸಾಮಾನ್ಯ ವಿಜ್ಞಾನ 1) ಜೀವಕೋಶ

1.1) ಜೀವಕೋಶ

ಜೀವಕೋಶ

ಜೀವಕೋಶವು ಜೀವಿಯ ರಚನಾತ್ಮಕ ಹಾಗೂ ಕಾರ್ಯನಿರ್ವಾಹಕ

ಘಟಕವಾಗಿರುತ್ತದೆ. • ಜೀವಕೋಶದ ಮೂಲ ಘಟಕಕ್ಕೆ ಜೀವಕೋಶವೆಂದು ಹೆಸರಿಸಿದವರು 'ರಾಬರ್ಟ್

ಜೀವಕೋಶದಲ್ಲಿ ಮೂರು ಪ್ರಮುಖ ಭಾಗಗಳು ಇವೆ. ಅವುಗಳೆಂದರೆ :

1. ಕೋಶಪೂರೆ
2.ಕೋಶ ದ್ರವ್ಯ
3. ಕೋಶಬೀಜ

• ಕೋಶಪೊರೆ : ಜೀವಕೋಶವನ್ನು ರಕ್ಷಿಸಿ ಕೋಶದೊಳಗೆ ಹೋಗುವ ಮತ್ತು ಬರುವ ವಸ್ತುಗಳ ಚಲನೆಯನ್ನು ನಿಯಂತ್ರಿಸುವುದೇ ಕೋಶಪೊರೆ, ಕೋಶಪೂರ ಅತ್ಯಂತ ಸೂಕ್ಷ್ಮವಾದ ಪೊರೆಯಾಗಿದ್ದು ಜೀವಕೋಶವನ್ನು ಕೋಟೆಯಂತೆ ಆವರಿಸುತ್ತದೆ ಹಾಗೆಯೇ ಜೀವಕೋಶಕ್ಕೆ ನಿರ್ದಿಷ್ಟ ಆಕಾರ ನೀಡುತ್ತದೆ.

* ಕೋಶದ್ರವ್ಯ : ಇದು ಕೋಶಪೊರೆ ಮತ್ತು ಕೋಶಬೀಜದ ನಡುವೆ ಇರುವ ದ್ರವವಾಗಿದೆ.

* ಕೋಶಕೇಂದ್ರ (ಕೋಶಬೀಜ) : ಇದು ಜೀವಕೋಶದ ಮಧ್ಯೆ ಇರುವಂತಹ ಕಾಯ. ಇದು ನಾಲ್ಕು ಮುಖ್ಯ ಭಾಗಗಳನ್ನು ಹೊಂದಿದ್ದು 'ವರ್ಣಜಾಲ' ಎಂಬ ದಾರದಂತಹ ರಚನೆ ಪ್ರಮುಖವಾದುದು. ಇದು ಕೋಶ ವಿಭಜನೆಯ ಸಮಯದಲ್ಲಿ ಸಣ್ಣ ತಂತುಗಳಾಗಿ ಮಾರ್ಪಡುತ್ತದೆ. ಕೋಶ ಬೀಜವು ಕಿರುಕೋಶಬೀಜಗಳನ್ನು ಸಹ ಒಳಗೊಂಡಿರುತ್ತದೆ. ಕೋಶಕೇಂದ್ರ ದ್ರವ್ಯದಲ್ಲಿ ಕಾಣುವ ದಾರದ ಎಳೆಗಳಂತಹ ರಚನೆಗಳನ್ನು ಕ್ರೋಮ್ಯಾಟಿನ್' ಎಂದು ಕರೆಯುತ್ತಾರೆ.

* ನ್ಯೂಕ್ಲಿಯರ್ ಪೊರೆ : ಕೋಶಕೇಂದ್ರವನ್ನು ಆವರಿಸಿರುವ ಪೊರೆಯಾಗಿದೆ. ಇದರಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು ಅವುಗಳ ಮೂಲಕ ಕೋಶಕೇಂದ್ರದ ಒಳಗೆ ಹಾಗೂ ಹೊರಗೆ ರಾಸಾಯನಿಕ ವಸ್ತುಗಳ ಸಾಗಾಣಿಕೆಯನ್ನು ನಿಯಂತ್ರಿಸುತ್ತದೆ.

+ ಕಿರುಕೋಶ ಬೀಜ : ಕಿರುಕೋಶ ಬೀಜವು ರೈಬೋಸ್ ನೂಕ್ಲಿಕ್ ಆಮ್ಲ ಮತ್ತು ಸಸಾರಜನಕದಿಂದ ಆಗಿರುತ್ತದೆ.


ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು :

* ಮೈಟೋಕಾಂಡ್ರಿಯಾ (ಶಕ್ತಿ ಉತ್ಪಾದನಾ ಕೇಂದ್ರ) : ಮೈಟೋಕಾಂಡ್ರಿಯಾ ಕಣದಂಗಗಳನ್ನು ವಿಜ್ಞಾನಿ 'ಕೊಲಿಕ‌' ಕಂಡುಹಿಡಿದರು. ಇದು ಕೋಶದ ಉಸಿರಾಟ ಕೇಂದ್ರವಾಗಿದೆ. ಇಲ್ಲಿ ಶಕ್ತಿ ಬಿಡುಗಡೆಯಾಗುವುದರಿಂದ ಇದನ್ನು ಜೀವ ಕೋಶದ ಶಕ್ತಿ ಕೇಂದ್ರ ಎನ್ನುವರು.

* ರೈಬೋಸೋಮ (ಪ್ರೋಟೀನ್ ಕಾರ್ಖಾನೆ) : 1955ರಲ್ಲಿ 'ಫ್ಯಾರಡೆ, ರೈಬೋಸೋಮ್ ಕಣದಂಗಗಳನ್ನು ಕಂಡುಹಿಡಿದರು. ಇದು ಸಸಾರಜನಕ ತಯಾರಿಸುವುದರೊಂದಿಗೆ ರೈಬೋಸೋಮುಗಳು ಪ್ರೋಟೀನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.

+ ಗಾಲಿ ಸಂಕೀರ್ಣ : ಇದರ ಮುಖ್ಯ ಕಾರ್ಯ ಪ್ರೋಟೀನುಗಳನ್ನು ಸಂಗ್ರಹಿಸಿ ಜೀವಕೋಶಕ್ಕೆ ಬೇಕಾದ ಕಿಣ್ವಗಳನ್ನು ಉತ್ಪಾದಿಸುತ್ತದೆ. ಲೈಸೋಸೋಮ್ ಗಳನ್ನು ಉತ್ಪತ್ತಿ ಮಾಡಲು ಇದು ನೆರವಾಗುತ್ತದೆ.

* ಕೋಶರಸಾಂತರ ಜಾಲ : ಇದು ಕೋಶಪೊರೆಯಿಂದ ಕೋಶ ಬೀಜದವರೆಗೆ ಹರಡಿರುವ ನಳಿಕೆಗಳ ಜಾಲವಾಗಿದೆ.

ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು :

* ಸೆಂಟ್ರಿಯೋಲ್ : ಕೋಶಕೇಂದ್ರದ ಸಮೀಪದಲ್ಲಿ ಇರುವ ಕಣದಂಗವಾಗಿದ್ದು ಕೋಶ ವಿಭಜನೆಯ ಸಂದರ್ಭದಲ್ಲಿ ಕದಿರಿನ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.

* ವರ್ಣಜಾಲ (ಕ್ರೋಮ್ಯಾಟಿನ್) :ಅನುವಂಶಿಕ ಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ. ಇದು ಡಿ.ಎನ್.ಎ ಮತ್ತು ಪ್ರೋಟೀನ್ ಗಳಿಂದ ಮಾಡಲ್ಪಟ್ಟಿವೆ.

* ಸೋಜೋಮ್ : ಅನುಪಯುಕ್ತ ವಸ್ತು ಮತ್ತು ಮುದಿ ಕೋಶಗಳ ನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ ಇದನ್ನು ಆತ್ಮಹತ್ಮಾ ಸಂಚಿ' ಎಂದು ಕರೆಯುತ್ತಾರೆ. ಲೈಸೋಸೋಮ್ ಕಣದಂಗಗಳನ್ನು ಕಂಡುಹಿಡಿದ ವಿಜ್ಞಾನಿ ಕ್ರಿಶ್ಚಿಯನ್-ಡಿ-ಡು.

* ಕಿರುಕೋಶಬೀಜ ಕೇಂದ್ರ : ಇದು ದೇಹದಲ್ಲಿ ಸಸಾರಜನಕ ತಯಾರಿಸಲು ಬೇಕಾದ ವಸ್ತುಗಳನ್ನು ಸಜ್ಜುಗೊಳಿಸುತ್ತದೆ.

+ ಸಮರೂಪಿ ವರ್ಣತಂತುಗಳು : ಕೋಶಗಳಲ್ಲಿ ಜೋಡಿಯಾಗಿರುವ ವರ್ಣತಂತುಗಳಿಗೆ ಸಮರೂಪಿ ವರ್ಣತಂತುಗಳು ಎನ್ನುವರು. ಇವುಗಳಲ್ಲಿ ಒಂದು




ವರ್ಣತಂತುವು ಎರಡು ಸಮಾನಾಂತರ ಎಳೆಗಳಿಂದ ಕೂಡಿರುತ್ತದೆ. ಇವುಗಳನ್ನು ಬಂಧಿಸುವ ಬಿಂದುವನ್ನು 'ಸೆಂಟ್ರಿಯೋಮಿಯರ್' ಎನ್ನುವರು.

+ ಕ್ಲೋರೋಪ್ಲಾಸ್ಟ್ (ಹರಿತ್ತು) : ಸಸ್ಯಕೋಶಗಳಲ್ಲಿ ಕಂಡುಬರುವ ಹಸಿರಾದ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವ ಕೇಂದ್ರ ಮತ್ತು ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವುದು.

ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ ಕೋಶಕ್ಕೆ ಆಂತರಿಕವಾಗಿ ಆಧಾರ ನೀಡುವುದು ಮತ್ತು ಪ್ರೋಟಿನನ್ನು ಸಾಗಿಸುತ್ತದೆ.

ಜೀವಕೋಶದ ಆಧಾರದ ಮೇಲೆ ಜೀವಿಗಳ ವಿಂಗಡನೆ

* ಏಕಕೋಶ ಜೀವಿಗಳು : ಇವು ಒಂದೇ ಜೀವಕೋಶವನ್ನು ಹೊಂದಿದ್ದು ಆ ಜೀವಕೋಶವು ಎಲ್ಲ ಕ್ರಿಯೆಗಳನ್ನು ಕೈಗೊಳ್ಳುತ್ತದೆ.

* ಬಹುಕೋಶೀಯ ಜೀವಿಗಳು : ಇವು ಒಂದಕ್ಕಿಂತ ಹೆಚ್ಚು ಜೀವಕೋಶಗಳನ್ನು ಹೊಂದಿದ್ದು, ವಿಶಿಷ್ಟ ಅಂಗಾಂಶ, ಅಂಗ ಮತ್ತು ಅಂಗವ್ಯೂಹ ಹೊಂದಿದ ಜೀವಿಗಳನ್ನು ಬಹುಕೋಶಿಯ ಜೀವಿಗಳು ಎಂದು ಕರೆಯುತ್ತಾರೆ.

ಕೋಶ ವಿಭಜನೆ

ಒಂದು ಜೀವಕೋಶ ಪ್ರೌಢಾವಸ್ಥೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನ ಎನ್ನುವರು. ಏಕಕೋಶ ಜೀವಿಗಳಲ್ಲಿ ಈ ವಿಭಜನೆ ಆ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಆದರೆ ಬಹುಕೋಶ ಜೀವಿಗಳಲ್ಲಿ ಬೆಳವಣಿಗೆ, ಸವದ ಭಾಗಗಳ ದುರಸ್ತಿ, ಪುಜನನ ಕ್ರಿಯೆಗಳು ನಡೆಯುತ್ತದೆ. ಕೋಶ ವಿಭಜನೆಯಲ್ಲಿ ಎರಡು ವಿಧಗಳಿವೆ. ಅವು

1. ಮೈಟೋಸಿಸ್

2. ಮಿಯಾಸಿಸ್

1. ಮೈಟೋಸಿಸ್ : ಇದು ಮೇಲ್ವರ್ಗದ ಸಸ್ಯ ಹಾಗೂ ಪ್ರಾಣಿಗಳ ವರ್ಧನ ಕೋಶಗಳಲ್ಲಿ ಸಾಮಾನ್ಯವಾಗಿರುತ್ತದೆ. ಪ್ರೌಢಕೋಶವು ಎರಡು ಮರಿಕೋಶಗಳಾಗಿ ವಿಭಜಿಸುತ್ತದೆ. ಈ ವಿಭಜಿತ ಕೋಶಗಳಲ್ಲೂ ಪ್ರೌಢಕೋಶದಲ್ಲಿದ್ದ ಪ್ರ ವರ್ಣರೇಖೆಗಳು ಇರುತ್ತವೆ.


2. ಮಿಯಾಸಿಸ್ : ವರ್ಣರೇಖೆಗಳನ್ನು ದ್ವಿಗುಣಿತ ಸ್ಥಿತಿಯಿಂದ ಏಕಸ್ಥಿತಿಗೆ ಇಳಿಸುವ ಕೋಶ ವಿಭಜನೆಯಲ್ಲಿ ಮೊದಲು ಸಂಖ್ಯಾ ಕ್ಷೀಣ ವಿಭಜನೆಯಾಗಿ ನಂತರ ಸಮಭಾಜಕ ವಿಭಜನೆಯಾಗುತ್ತದೆ.


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಾಮಾನ್ಯ ವಿಜ್ಞಾನ - ಜೀವಕೋಶ

Previous
« Prev Post

No comments:

Post a Comment

My Blog List

Followers

Popular Posts